ಶುದ್ಧ ಕುಡಿಯುವ ನೀರು ಘಟಕ ಬಬಾ೯ದ್..!

ಶುದ್ಧ ಕುಡಿಯುವ ನೀರು ಘಟಕ ಬಬಾ೯ದ್..!

ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲೂಕಿನ ಮಲ್ಲಾಬಾದ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿರುವ ಚಿಂಚೋಳಿ ಗ್ರಾದಲ್ಲಿ ಶುದ್ಧ ಕುಡಿಯುವ ನೀರು ಘಟಕ ನಿಮಾ೯ಣವಾಗಿ ಹಲವು ದಶಕಗಳೇ ಕಳೆದು ಹೋದರು ಇನ್ನು ಕುಡಿಯುವ ನೀರು ಘಟಕ ದುರಸ್ತಿ ಆಗುತ್ತಿಲ್ಲ.

ಚಿಂಚೋಳಿ ಗ್ರಾಮದಲ್ಲಿ ನಿಮಾ೯ಣವಾದ ದಿನದಿಂದ ಇಲ್ಲಿಯವರೆಗೆ ಶುದ್ಧ ಕುಡಿಯುವ ನೀರು ಘಟಕ ಬಳಕೆಯಲ್ಲಿಲ್ಲವೆಂದು ಗ್ರಾಮದ ನಿವಾಸಿಯಾದ ಹಾಗೂ ಮಾಹಿತಿ ಹಕ್ಕು ಕಾಯ೯ಕತ೯ರಾದ ಶ್ರೀ ದತ್ತಾತ್ರೇಯಾ ಎನ್‌ ಐಹೋಳೆಯವರು ಹಲವು ಬಾರಿ ಜಿಲ್ಲಾ ಪಂಚಾಯತ ಹಾಗೂ ತಾಲೂಕಾ ಪಂಚಾಯತಗಳಲ್ಲಿ ದೂರು ಸಲ್ಲಿಸಿದರೂ ಇಲ್ಲಿಯವರೆಗೆ ಯಾವೂದೇ ಕ್ರಮ ತೆಗೆದುಕೊಂಡಿಲ್ಲೆಂದು ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ. ಘಟಕಗಳ ಅವಶೆಷಗಳೇ ಇಲ್ಲ. ಲಕ್ಷಾಂತರ ರೂಪಾಯಿಗಳು ಖಚಿ೯ನಲ್ಲಿ ನಿಮಾ೯ಣ ಮಾಡಿ ಅವುಗಳು ನಿವ೯ಹಣೆ ಮಾಡಕ್ಕಾಗಲ್ಲ ಅಂದ್ರೆ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಯಾಕ ಬೇಕು..? ಪಂಚಾಯತ ಅಭಿವೃದ್ಧಿ ಅಧಿಕಾರಿಗಳು Panchayat Development ಮಾಡುತ್ತಿಲ್ಲ,

ಪ್ರತಿ ವಷ೯ ಪ್ರತಿ ಗ್ರಾಮ ಪಂಚಾಯತನಲ್ಲಿ 80 ಲಕ್ಷಕ್ಕೂ ಹೆಚ್ಚು ಹಣ ಲೂಟಿ ಆಗುತ್ತಿದೆ. ಈ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾದರೂ ಕೂಡ ಭ್ರಷ್ಠ ಪಿ.ಡಿಒ.ಗಳ ವಿರುದ್ಧ ಯಾವೂದೇ ಕ್ರಮಗಳು ತೆಗೆದುಕೊಳ್ಳುತ್ತಿಲ್ಲ. ವಿದ್ಯಾಧರ್‌ ಕಾಂಬಳೆ, ಮಂಜೂಳಾ ಎಸ್.‌ ಬಾಣಿರವರ ವಿರುದ್ಧ ಮುಖ್ಯ ಕಾಯ೯ನಿವಾಹಕ ಅಧಿಕಾರಿ ಮತ್ತು ಉಪ ಕಾಯ೯ದಶಿ೯ಗಳು ಜಿಲ್ಲಾ ಪಂಚಾಯತ ಕಲಬುರಗಿ ಇವರಿಗೆ ದೂರುಗಳು ನೀಡಿದರೂ ಯಾವೂದೆ ಸೂಕ್ತ ತನಿಖೆ ಆಗಿಲ್ಲವೆಂದು 2022-2023 ನೇ ನಾಲಿನಲ್ಲಿ ಹರ್‌ ಘರ್‌ ಜಲ್‌ ಯೋಜನೆ ಅಡಿಯಲ್ಲಿ ಮನೆ ಮನೆಗೆ ಪೈಪ್‌ ಲೈನ್‌ ಮಾಡಿ ನಳಗಳನ್ನು ಕೂಡಿಸಲಾಗಿದೆ. ಆದರೆ ಆ ನಳಗಳಲ್ಲಿ ಇಲ್ಲಿಯವೆರೆಗೆ ಒಂದು ಹನಿ ನೀರು ಕೂಡ ಬಂದಿಲ್ಲ. ಜಿಲ್ಲಾ ಪಂಚಾಯತ ಅಧಿಕಾರಿಗಳು ಮತ್ತು ತಾಲೂಕಾ ಪಂಚಾಯತ ಅಧಿಕಾರಿಗಳು ಆ ನಳಗಳಲ್ಲಿ ಸೂಸು ಮಾಡಬೇಕಷ್ಟೆ..

Leave a Reply

Your email address will not be published. Required fields are marked *