ಪರಿಶಿಷ್ಟ ಜಾತಿ ಪ್ರಮಾಣ ಪತ್ರಗಳ ದುಬ೯ಳಕೆ..!
ಪರಿಶಿಷ್ಟ ಜಾತಿ ಪ್ರಮಾಣ ಪತ್ರಗಳ ದುಬ೯ಳಕೆ..! ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲೂಕು ಭ್ರಷ್ಟ ಅಧಿಕಾರಿಗಳಿಂದ ತುಂಬಿ ತುಳುಕುತ್ತಿದೆ. ಅಫಜಲಪೂರ ತಾಲೂಕಾ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಗೊಬ್ಬುರ (ಬಿ) ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಯಾದ ಶ್ರೀ ಹಾಜಿಮಲ್ಲಂಗ ಯಲ್ಗಾರ್ (ಪಿ.ಡಿ.ಒ) ಮತ್ತು ಕಾಯ೯ದಶಿ೯ಯಾದ ಶ್ರೀ ಅಖಂಡೆಪ್ಪ ಹುಗ್ಗಿ ಇವರು ಗ್ರಾಮ ಪಂಚಾಯತ ಕಾಯಾ೯ಲಯಕ್ಕೆ ಬಾರದೆ ಸಿಬ್ಬಂದಿ ಮತ್ತು ಸದಸ್ಯರಿಗೆ ಕಲಬುರಗಿ ಕರೆಯಿಸಿ ಕಲಬುರಗಿಯಲ್ಲಿಯೆ ಕಾಯ೯ನಿವ೯ಹಿಸುತ್ತಿದ್ದಾರೆ.
ಗೊಬ್ಬುರ (ಬಿ) ಗ್ರಾಮ ಪಂಚಾಯತನಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆ ಅಡಿಯಲ್ಲಿ ಸುಮಾರು 15ಕ್ಕೂ ಅಧಿಕ ಜನ ಸಾಮಾನ್ಯ ಜಾತಿಯ ಫಲಾನುಭವಿಗಳಿಗೆ ರೂ.12000/- ಗಳು ಜಮಾ ಮಾಡುವುದರ ಬದಲು ಪರಿಶಿಷ್ಷ ಜಾತಿಯವರ ಜಾತಿ ಪ್ರಮಾಣ ಪತ್ರಗಳನ್ನು ದಾಖಲಿಸಿ ರೂ.15000/- ಗಳು ಬಿಲ್ ಮಾಡಲಾಗಿದೆ. ಗ್ರಾಮೀಣ ಪ್ರದೇಶಗಳ ಸುಧಾರಣೆಗಾಗಿ ನೂರಾರು ಯೋಜನೆಗಳು ಬಂದರೂ ಕೂಡ ಇಂಥ ಭ್ರಷ್ಟ ಅಧಿಕಾರಿಗಳಿರುವುದರಿಂದ ಈಗಲೂ ಕೂಡ ಹಳ್ಳಿ ಹತ್ತು ವಷ೯ದ ಹಿಂದೆ ಹೇಗಿದ್ದವೋ ಹಾಗೆ ಇವೆ.
ಕುಡಿಯೋ ನೀರಿಗಾಗಿ ಹೊಡೆದಾಟ, ಬಚ್ಚಲು ನೀರಿನಿಂದ ತುಂಬಿ ನಿಂತಿರುವ ನಾಲಿಗಳು, ಕುಡಿಯೊಕ್ಕೆ ಶುದ್ಧ ನೀರಿಲ್ಲ. ಬಚ್ಚಲು ನೀರಿನಿಂದ ತುಂಬಿ ನಿಂತಿರುವ ನಾಲಿಯ ಪಕ್ಕದಿಂದ ನಡೆದಾಡುವುದಕ್ಕೂ ಹೇಸಿಗೆ ಆಗುತ್ತೆ. ಸಿಬ್ಬಂಧಿಗಳು ಕಾಯ೯ನಿವ೯ಹಿಸದೆ ವೇತನ ಪಡೆಯುತ್ತಿದ್ದಾರೆ. ಕೆಲವು ಪಂಚಾಯತಿಗಳಲ್ಲಿ ಯಾರದೋ ಕೆಲಸ, ಇನ್ನ್ಯಾರೋ ಮಾಡುತ್ತಿದ್ದಾರೆ.
ಹಾಜರಾತಿಯಲ್ಲಿ ಒಬ್ಬರ ಹೆಸರು ಕಾಯ೯ನಿವ೯ಹಿಸೋದು ಬೆರೋಬ್ಬರು. ಒಬ್ಬ ಬಿಲ್ ಕಲೇಕ್ಟರ್, ಪಂಪ್ ಆಪರೇಟರ್ನಿಗೆ 20,000/- ವೇತನವಿದ್ದರೆ ಅವನು ತನ್ನ ಕಾಯ೯ನಿವ೯ಹಿಸಲು ರೂ.5000/- ಕೊಟ್ಟು ಇನ್ನೊಬ್ಬನನ್ನು ನೇಮಿಸುತ್ತಿದ್ದಾನೆ. ಮಾಹಿತಿ ಹಕ್ಕು ಕಾಯ್ದೆ 2005ರ ನಿಯಮ 6(1)ರ ಅಡಿಯಲ್ಲಿ ಮಾಹಿತಿ ಕೋರಿ ಯಾರಾದರೂ ಮಾಹಿತಿ ಅಜಿ೯ ಸಲ್ಲಿಸಲು ಪಂಚಾಯತ ಕಾಯಾ೯ಲಯಕ್ಕೆ ಹೋದಲ್ಲಿ ಹಾಜಿ ಮಲ್ಲಂಗ್ ಯಲಗಾರ ಆ ಅಜಿ೯ಗಳನ್ನು ತಿರಸ್ಕರಿಸಿ, ಅಜಿ೯ಗಳನ್ನು ಅಂಚೆ ಮೂಲಕ ಕಳುಹಿಸಲು ಸೂಚಿಸುವ ಮೂಲಕ ಅಜಿ೯ಗಳನ್ನು ಅಪ್ರತ್ಯಕ್ಷವಾಗಿ ಮಾಹಿತಿಯನ್ನು ನೀಡಲು ನಿರಾಕರಿಸುತ್ತಾರೆ.
ದಿನಾಂಕ 5, 6, ಮತ್ತು 07-09-2023 ರಂದು ಗೊಬ್ಬುರ (ಬಿ) ಪಂಚಾಯತ ಕಾಯಾ೯ಲಯಕ್ಕೆ ಖುದ್ದಾಗಿ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದು, ಗೊಬ್ಬುರ (ಬಿ) ಗ್ರಾಮ ಪಂಚಾಯತ ಕಾಯ೯ದಶಿ೯ಗಳಾದ ಶ್ರೀ ಅಖಂಡೆಪ್ಪ ಹುಗ್ಗಿ ಅವರನ್ನು ಸದರಿ ವಿಷಯದ ಬಗ್ಗೆ ವಿಚಾರಿಸಿದಾಗ ಅನಾರೋಗ್ಯದ ನೆಪ ಹೇಳುತ್ತಿದ್ದು, ದಿನಾಂಕ 11-09-2023 ರಂದು ಕಾಯ೯ದಶಿ೯ಗಳಿಗೆ ವಿಚಾರಿಸಿದಾಗ ಅವರ ಮಗಳಿಗೆ ಅನಾರೋಗ್ಯವಿರುವುದನ್ನು ತಿಳಿಸುತ್ತಾರೆ. ಸಾವ೯ಜನಿಕರು ಫೋನ್ಕರೆ ಮಾಡಿದಾಗ ಕರೆಗಳನ್ನು ತೆಗೆದುಕೊಳ್ಳದೆ ಸಾವ೯ಜನಿಕರ ಕುಂದು ಕೊರತೆಗಳಿಗೆ ಸ್ಪಂದಿಸದೆ ಪ್ರಜಾ ಪ್ರಭುತ್ವವನ್ನು ಗಾಳಿಗೆ ತೂರುವ ಕೆಲಸ ಮಾಡುತ್ತಿದ್ದಾರೆ ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು Panchayat Development ಮಾಡುತ್ತಿಲ್ಲ, Personal Development ಆಗುತ್ತಿದ್ದಾರೆ ಅಂತ ಸ್ಥಳಿಯರು ಆರೋಪಿಸಿದ್ದಾರೆ.
ಪ್ರತಿ ವಷ೯ ಪ್ರತಿ ಗ್ರಾಮ ಪಂಚಾಯತನಲ್ಲಿ 80 ಲಕ್ಷಕ್ಕೂ ಹೆಚ್ಚು ಹಣ ಲೂಟಿ ಆಗುತ್ತಿದೆ. 2022-2023 ನೇ ನಾಲಿನಲ್ಲಿ ಹರ್ ಘರ್ ಜಲ್ ಯೋಜನೆ ಅಡಿಯಲ್ಲಿ ಅಧಿಕಾರಿಗಳು ಯಾಕ ಬೇಕು..? ಪಂಚಾಯತ ಅಭಿವೃದ್ಧಿ ಅಧಿಕಾರಿಗಳು Panchayat Development ಮಾಡುತ್ತಿಲ್ಲ, Personal Development ಆಗುತ್ತಿದ್ದಾರೆ.
ಎಷ್ಟೋ ಗ್ರಾಮ ಪಂಚಾಯತಗಳಲ್ಲಿ ಶುದ್ಧ ಕುಡಿಯುವ ನೀರು ಘಟಕಗಳು ನಿಮಾ೯ಣವಾಗಿವೆ ಆದರೆ ಅವು ಯಾವು ಚಾಲನೆಯಲ್ಲಿಲ್ಲ. ಘಟಕಗಳ ಅವಶೆಷಗಳೇ ಇಲ್ಲ. ಲಕ್ಷಾಂತರ ರೂಪಾಯಿಗಳು ಖಚಿ೯ನಲ್ಲಿ ನಿಮಾ೯ಣ ಮಾಡಿ ಅವುಗಳು ನಿವ೯ಹಣೆ ಮಾಡಕ್ಕಾಗಲ್ಲ ಅಂದ್ರೆ ಪಂಚಾಯತ ಅಭಿವೃದ್ಧಿ ಮನೆ ಮನೆಗೆ ಪೈಪ್ ಲೈನ್ ಮಾಡಿ ನಳಗಳನ್ನು ಕೂಡಿಸಲಾಗಿದೆ. ಆದರೆ ಆ ನಳಗಳಲ್ಲಿ ಇಲ್ಲಿಯವೆರೆಗೆ ಒಂದು ಹನಿ ನೀರು ಕೂಡ ಬಂದಿಲ್ಲ. ಜಿಲ್ಲಾ ಪಂಚಾಯತ ಅಧಿಕಾರಿಗಳು ಮತ್ತು ತಾಲೂಕಾ ಪಂಚಾಯತ ಅಧಿಕಾರಿಗಳು ಆ ನಳಗಳಲ್ಲಿ ಸೂಸು ಮಾಡಬೇಕಷ್ಟೆ. ಆದ್ದರಿಂದ ಇಂಥ ಭ್ರಷ್ಟ, ಕತ೯ವ್ಯದ್ರೋಹಿಗಳಾದ ಗೊಬ್ಬುರ (ಬಿ) ಗ್ರಾಮ ಪಂಚಾಯತಿಯ ಕಾಯ೯ದಶಿ೯ಯಾದ ಶ್ರೀ ಅಖಂಡೆಪ್ಪ ಹುಗ್ಗಿ ಮತ್ತು ಪಂಚಾಯತ ಅಭಿವೃದ್ದಿ ಅಧಿಕಾರಿಗಳಾದ ಶ್ರೀ ಹಾಜಿಮಲ್ಲಂಗ ಯಲ್ಗಾರ್ ಇವರನ್ನು ಅಫಜಲಪೂರ ತಾಲೂಕಿನಿಂದ ಕೂಡಲೆ ಬೇರೆ ತಾಲೂಕಿಗೆ ವಗಾ೯ವಣೆ ಮಾಡಬೇಕು ಇವರು ಇನ್ನು ಇದೇ ಪಂಚಾಯತನಲ್ಲಿದ್ದರೆ ಪಂಚಾಯತವನ್ನು ಗುಡಿಸಿ ಗುಂಡಾಂತರ ಮಾಡುತ್ತಾರೆ ಅಂತ ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ